ಶ್ರೀಮತಿ ಭಾರತಿಮೇಡಂ (ಅಧ್ಯಕ್ಷರು ವನಿತಾ ಸದನ) ಇವರ ಹಳೇಯ ವಿದ್ಯಾರ್ಥಿಗಳ ತಂಡ (1972ರ ಬ್ಯಾಚ್) ಸುಮಾರು ಮಹಿಳೆಯರು ಸೇರಿದಂತೆ ಒಟ್ಟು 18 ಜನ ವಿದ್ಯಾರ್ಥಿಗಳ ಆಗಮಿಸಿದ್ದರು. ಅವರೆಲ್ಲ ವಿದೇಶಗಳಲ್ಲಿ ಉನ್ನತ ಹುದ್ದೆಯನ್ನು ಹೊಂದಿದ್ದು ಸೇವೆ ಸಲ್ಲಿಸಿ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಹಾಗೂ ಮೈಸೂರು ಮತ್ತು ಮಂಗಳೂರಿನಲ್ಲಿ ವಾಸವಿದ್ದೇವೆ ಎಂದು ತಮ್ಮ ಪರಸ್ಪರ ಪರಿಚಯದಲ್ಲಿ ಹೇಳಿ ಕೊಂಡರು. ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳು ಶಾಲೆಯನ್ನು ನೋಡಿ ತಮ್ಮ ನೆನಪುಗಳಲ್ಲಿ ತೇಲಾಡಿದರು. ತಮ್ಮ ಆರಾಧ್ಯದೈವಾರಾದ ಶ್ರೀಮತಿ. ಭಾರತಿ ಮೇಡಂ ಅವರು ಆಗಮಿಸಿದಾಗ ಆ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟುವಂತಿತ್ತು.
ಅಂತಿಮವಾಗಿ ಶ್ರೀಮತಿ ಭಾರತಿ ಮೇಡಂ ಅವರಿಂದ ಕೇಕ್ ಕತ್ತರಿಸಿ ವಿತರಿಸಿದರು. ನಂತರ ಮೇಡಂ ಅವರನ್ನು ಹಾರ ತುರಾಯಿಗಳಿಂದ ಸನ್ಮಾನಿಸಿದರು. ಆದಿನ ಹಾಜರಿದ್ದ ನಮ್ಮ ಟ್ರಸ್ಟ್ನ ಅಧ್ಯಕ್ಷರಾದ ಶ್ರೀಯುತ ಬಿ.ಆರ್. ರವಿ ಸರ್ ಅರವರನ್ನು ಸನ್ಮಾನಿಸಿದರು ಹಾಡನ್ನು ಹಾಡಿದರು. ಹಾಡಿಸಿದರು ಈ ಸಂಭ್ರಮದಲ್ಲಿ ಕಾರ್ಯದರ್ಶಿನಿ ಶ್ರೀಮತಿ. ಯಶಸ್ವಿನಿ ಜಗದೀಶ್ ಅವರು ಟ್ರಸ್ಟ್ ಸದಸ್ಯರು ಆಡಳಿತ ಮಂಡಳಿಯ ಸದಸ್ಯರು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಅವರು ಹಾಗೂ ಸಿಬ್ಬಂದಿ ವರ್ಗದವರು ಮತುತ ಸಹಾಯಕ ಸಿಬ್ಬಂದಿ ವರ್ಗದವರು ಹಾಜರಿದ್ದರು.