ದಿನಾಂಕ 15/08/2025ರಂದು ಬೆಳಿಗ್ಗೆ 8.00ಗಂಟೆಗೆ ವನಿತಾ ಸದನ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು ಮುಖ್ಯ ಅತಿಥಿಗಳಾಗಿ ನಿವೃತ್ತ ಕರ್ನಲ್ ಎಂ.ಎಸ್. ಸುರೇಂದ್ರನಾಥ್ ರವರು, ಗೌರವಾನ್ವಿತ ಅತಿಥಿಗಳಾಗಿ ಶ್ರೀಮತಿ. ಶಾಂತ ಕೃಷ್ಣ ರವರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಟ್ರಸ್ಟ್‍ನ ಆಧ್ಯಕ್ಷರಾದ ಶ್ರೀ. ಬಿ.ಆರ್. ರವಿ ಸರ್, ಟ್ರಸ್ಟಿಗಳಾದ ಶ್ರೀ. ಕರ್ನಲ್ ಸಿ.ವಿ.ರಾಜೇಂದ್ರಸರ್‍ರವರು, ಮತ್ತೊಬ್ಬ ಟ್ರಸ್ಟಿಗಳಾದ ಶ್ರೀ. ಶ್ರೀನಿವಾಸ್ ಸರ್‍ರವರು, ವನಿತಾ ಸದನದ ಅಧ್ಯಕ್ಷರಾದ ಶ್ರೀಮತಿ. ಭಾರತಿ ಎನ್. ರವರು, ಗೌ|| ಕಾರ್ಯದರ್ಶಿನಿಗಳಾದ ಶ್ರೀಮತಿ. ಯಶಸ್ವಿನಿ ಜಗದೀಶ್‍ರವರು, ಶಿಕ್ಷಕ ವೃಂದದವರು, ಸಹಾಯಕ ಸಿಬ್ಬಂದಿ ವರ್ಗದವರು ಮಕ್ಕಳು ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸಿದ್ದರು. ಮಕ್ಕಳಿಂದ ಪಥಸಂಚಲನ, ದೇಶಭಕ್ತಿ ಗೀತೆ ನೃತ್ಯ, ಡಂಬಲ್ಸ್, ದೇಶಭಕ್ತಿ ಗೀತೆ, ಪಿರಮಿಡ್ ಫಾರ್ಮೇಷನ್, ದೇಶಭಕ್ತಿ ಗೀತೆ ಸಾಂಸ್ಕøತಿಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
















