ದಿನಾಂಕ 26/06/2025ರ ಶುಕ್ರವಾರ ನರ್ಸರಿ ವಿಭಾಗದ ಮಕ್ಕಳಿಗೆ ವನಿತಾ ಸದನದ ಆಡಳಿತಾಧಿಕಾರಿಗಳ ಮೂಲಕ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮಕ್ಕೆ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿಸರ್,ವನಿತಾ ಸದನದ ಅಧ್ಯಕ್ಷರಾದ ಶ್ರೀಮತಿ. ಭಾರತಿ ಎನ್. ಟ್ರಸ್ಟಿಗಳಾದ ಹೇಮಂತ್ ಕೊರವಾರ್‍ರವರು, ಗೌ|| ಕಾರ್ಯದರ್ಶಿನಿಯವರಾದ ಶ್ರೀಮತಿ ಯಶಸ್ವಿನಿ ಜಗದೀಶ್‍ರವರು, ಸಂಸ್ಧೆಯ ಮಗಳಾದ ಶ್ರೀಮತಿ. ಶ್ಯಾಮಾಲ ಜಯರಾಂ ರವರು, ಕಾರ್ಯಕಾರಿಣಿ ಸಮಿತಿಯ ಸದಸ್ಯೆಯವರಾದ ಎಲ್ಲರಿಗೂ ಮಾರ್ಗದರ್ಶನವನ್ನು ನೀಡುತ್ತಿರುವ ಶ್ರೀಮತಿ. ಚಿನ್ಮಯಿ ಮೇಡಂರವರು ಕಾರ್ಯಕ್ರಮಕ್ಕೆ ಹಾಜರಿದ್ದರು. ಮಕ್ಕಳಿಂದ ಅಕ್ಷರಭ್ಯಾಸವನ್ನು ಮಾಡಿಸಿ ಮೊದಲನೆ ಆಷಾಢ ಶುಕ್ರವಾರದ ಪೂಜೆಯನ್ನು ನಡೆಸಲಾಯಿತು. ಪೋಷಕವೃಂದದವರು ಕಾರ್ಯಕ್ರಮಕ್ಕೆ ಹಾಜರಿದ್ದರು.










