ದಿನಾಂಕ 12/02/2024ರ ಸೋಮವಾರ ವನಿತಾ ಸದನದಲ್ಲಿ ತ್ಯಾಗರಾಜರು ಮತ್ತು ಶ್ರೀ. ಪುರಂದರದಾಸರ ಆರಾಧನೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಸಂಸ್ಧೆಯ ಸದಸ್ಯರು, ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಆರಾಧನೆಯಲ್ಲಿ ಸದಸ್ಯರುಗಳು ತ್ಯಾಗರಜರ ಹಾಗೂ ಪುರಂದರದಾಸರ ಕೀರ್ತನೆಯನ್ನು ಹಾಡಿದರು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ನಂತರ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.