77ನೇ ಸ್ವಾತಂತ್ರ್ಯ ದಿನಾಚರಣೆ 2023

ದಿನಾಂಕ 15/08/23ರ ಬೆಳಿಗ್ಗೆ 8-ಗಂಟೆಗೆ ವನಿತಾಸದನ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಮ್ಯಾಂಡರ್ ಎ.ಸಿ.ಎಸ್. ರಾವ್ ಮತ್ತು ಡಾ|| ವಸುಂಧರಾ ಫಿಲಯೋಜó ಅವರು ಆಗಮಿಸಿದ್ದರು. ಮುಖ್ಯ ಅತಿಥಿಯವರು ಧ್ವಜಾರೋಹಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಪಥಸಂಚಲನ, ಪೆರೆಟ್ ಬ್ಯಾಂಡ್‍ಸೆಟ್, ಶಾಲಾ ಶಿಕ್ಷಕಿಯರಿಂದ ದೇಶಭಕ್ತಿಗೀತೆ, ಮಕ್ಕಳಿಂದ ಲೆಜಿóಮ್ಸ್, ನೃತ್ಯ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಶ್ರೀಮತಿ. ಸುಶೀಲಾಬಾಯಿ ಶ್ರೀಮತಿ ನಾಗೇಶರಾವ್ ಟ್ರಸ್ಟ್‍ನ ಅಧ್ಯಕ್ಷರಾದ ಬಿ.ಆರ್. ರವಿ, ವನಿತಾಸದನದ ಅಧ್ಯಕ್ಷರಾದ ಶ್ರೀಮತಿ. ಎನ್. ಭಾರತಿ, ಗೌ||ಕಾರ್ಯದರ್ಶಿನಿಗಳಾದ ಶ್ರೀಮತಿ. ರೂಪವಾಣಿ, ಜಂಟಿ ಕಾರ್ಯದರ್ಶಿನಿಯವರಾದ ಶ್ರೀಮತಿ. ಶ್ಯಾಮಲಜಯರಾಂ ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರಾವ್, ಶ್ರೀಯುತ. ಕರ್ನಲ್‍ರಾಜೇಂದ್ರರವರು, ಸಂಸ್ಧೆಯ ಸದಸ್ಯರುಗಳು, ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್‍ರವರು, ಮಕ್ಕಳು, ಶಿಕ್ಷಕವೃಂದದವರು, ಸಿಬ್ಬಂಧಿ ವರ್ಗದವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ನಂತರ ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *