2022-2023ರ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮ

2022-23ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಭಾರತಿಮೇಡಂ, ಕಾರ್ಯದರ್ಶಿನಿಯವರಾದ ರೂಪವಾಣಿ ಮೇಡಂ, ಉಪಕಾರ್ಯದರ್ಶಿನಿಯವರಾದ ಶ್ರೀಮತಿ. ಶ್ಯಾಮಾಲಜಯರಾಂ, ಮತ್ತು ಟ್ರಿಸ್ಟ್‍ನ ಅಧ್ಯಕ್ಷರಾದ ಶ್ರೀಯುತ ಬಿ.ಆರ್. ರವಿಯವರು, ಹಾಗೂ ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರಾವ್ ರವರು, ಸಂಸ್ಧೆಯ ಆಡಳಿತಾಧಿಕಾರಿಯಾದ ಶ್ರೀಯುತ. ಶ್ರೀಕಾಂತ್‍ರವರು, ಸದಸ್ಯೆಯಾದ ಶ್ರೀಮತಿ. ಯಶಸ್ವಿನಿ ಜಗದೀಶ್ ರವರು ಹಾಜರಿದ್ದರು ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು. ಟ್ರಸ್ಟ್‍ನ ಸದಸ್ಯರಾದ ಶ್ರೀನಿವಾಸ್‍ರಾವ್‍ರವರ ಪತ್ನಿಯವರು ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಅಂಕವನ್ನು ಕನ್ನಡ ವಿಷಯದಲ್ಲಿ ಪಡೆದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನವನ್ನು ನೀಡಲಾಗಿತ್ತು. ಮತ್ತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಸಂಸ್ಧೆಯ ವತಿಯಿಂದ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಅಂತಿಮವಾಗಿ ಎಲ್ಲರಿಗೂ ಸಿಹಿಯನ್ನು ಹಂಚಲಾಯಿತು.

Leave a Reply

Your email address will not be published. Required fields are marked *