ದಿನಾಂಕ 03/06/2023 ರಂದು 10ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ ಕರೆಯಲಾಗಿತ್ತು. ಇದು ಈ ವರ್ಷದ ಮೊದಲ ಪೋಷಕರ ಸಭೆಯಾಗಿತ್ತು. 10ನೇ ತರಗತಿಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಭಾಗವಹಿಸಿದ್ದರು. ಆಡಳಿತ ಮಂಡಳಿಯ ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್ ಸರ್ ಮತ್ತು ಗೌರವ ಕಾರ್ಯದರ್ಶಿನಿಗಳಾದ ಶ್ರೀಮತಿ. ರೂಪವಾಣಿ ಮೇಡಂರವರು ಹಾಜರಿದ್ದರು. ಮುಖ್ಯ ಶಿಕ್ಷಕಿ ಅವರು ಪೋಷಕರಿಗೆ ಶಾಲೆಯಲ್ಲಿರುವ ಸೌಲಭ್ಯಗಳ ಬಗ್ಗೆ ಶಾಲಾ ಅವಧಿ ಪ್ರಾರಂಭ, ಮುಕ್ತಾಯ, ವಿಶೇಷ ತರಗತಿಯ ಸಮಯದ ಬಗ್ಗೆ ತಿಳಿಸಿದರು. ಶಾಲೆಯ ಶಿಸ್ತು ಮತ್ತು ಸಮವಸ್ತ್ರದ ಬಗ್ಗೆ ಸಮಯ ಪಾಲನೆ ಬಗ್ಗೆ ತಿಳಿಸಿದ್ದು, ಆಡಳಿತಾಧಿಕಾರಿಗಳು ಮತ್ತು ಕಾರ್ಯದರ್ಶಿನಿಯವರು ಪೋಷಕರನ್ನು ಕುರಿತು ಮಾತನಾಡಿದರು.